ಕನ್ನಡವನಾಡುವ ಎಲ್ಲಾ ಜನರೂ ತಮ್ಮ ಬರಹಗಳಲ್ಲಿ ಬಳಸುವಂತಹ ಒಂದು ಒಳನುಡಿಯಿದೆ. ಅದೇ ಎಲ್ಲರಕನ್ನಡ. ಈ ಎಲ್ಲರಕನ್ನಡದ ನುಡಿಯರಿಮೆಯ (ಭಾಷಾವಿಜ್ಞಾನದ) ಬಗೆಗಿನ ಸಂಶೋಧನೆ ಮತ್ತು ಬೆಳವಣಿಗೆಯ ಯೋಜನೆಯ ಹೆಸರೂ "ಎಲ್ಲರಕನ್ನಡ". ಮುಂದೆ ಓದಿ...
ಡಿ. ಎನ್. ಶಂಕರಭಟ್ಟರು
ಎಲ್ಲರಕನ್ನಡ ಯೋಜನೆಯಲ್ಲಿ ಡಿ. ಎನ್. ಶಂಕರಭಟ್ಟರು ಹಿರಿಯ ಸಂಶೋಧಕರಾಗಿದ್ದಾರೆ. ಅವರ ಒಂದು ಕಿರುಪರಿಚಯ ಇಲ್ಲಿದೆ.
ಭಟ್ಟರ ಹೊತ್ತಗೆಗಳು: ಮೊದಲ ಬಾರಿಗೆ ಮಿಂಬಲೆಯಲ್ಲಿ ಉಚಿತವಾಗಿ
ಮಿಂಬಲೆಗರಲ್ಲಿ ಎಲ್ಲರಕನ್ನಡದ (ಮತ್ತು ಬೇರೆಲ್ಲ "ಕನ್ನಡಂಗಳ") ನುಡಿಯರಿಮೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೊಟ್ಟಮೊದಲ ಬಾರಿಗೆ ಭಟ್ಟರ ಕೆಲವು ಮುಖ್ಯವಾದ ಕನ್ನಡದ ಹೊತ್ತಗೆಗಳನ್ನು ಉಚಿತವಾಗಿ ಪಿಡಿಎಫ್ ಮಾದರಿಯಲ್ಲಿ ಇಲ್ಲಿ ಇರಿಸಲಾಗಿದೆ. ಓದುಗರು ಇದರ ಉಪಯೋಗ ಪಡೆದುಕೊಂಡು ಈ ಯೋಜನೆಯಲ್ಲಿ ಆಸಕ್ತಿ ತೋರುವರೆಂದೂ, ಈ ಯೋಜನೆಗೆ ಮೈ-ಮನ-ಹಣವಿತ್ತು ಬೆಂಬಲಿಸುವರೆಂದೂ ನಂಬಿದ್ದೇವೆ. ಹೊತ್ತಗೆಗಳಿಗಾಗಿ ಇಲ್ಲಿ ಒತ್ತಿ.
ಪದಕೋಶಗಳು
ಡಾ. ಶಂಕರಭಟ್ಟರ "ಇಂಗ್ಲೀಷ್ ಪದಗಳಿಗೆ ಕನ್ನಡದ್ದೇ ಪದಗಳು" ಹಾಗೂ ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ. ಜಿ. ವೆಂಕಟಸುಬ್ಬಯ್ಯನವರ "ಪ್ರಿಸಂ" ಕನ್ನಡ-ಕನ್ನಡ ಮತ್ತು ಇಂಗ್ಲೀಷ್-ಕನ್ನಡ ಪದಕೋಶಗಳಲ್ಲಿ ಹುಡುಕಲು ಬರಹ ತಾಣಕ್ಕೆ ಹೋಗಿ.